ನಮ್ಮ ಉತ್ತರ ಕರ್ನಾಟಕದ ಕಡೆಯ ಹಿರಿಯರು ಒಂದು ಮಾತು ಹೇಳುತ್ತಿರುತ್ತಾರೆ, ಮೇಲಿಂದ ಮೇಲೆ.
ಅದೇನೆಂದರೇ, ‘ಮನುಷ್ಯನಾಗಿ ಹುಟ್ಟಿದ ಮೇಲೆ, ದರಿದ್ರತನ ಬಿಟ್ಟು ಮೈಮುರಿದು ಜವಾಬ್ದಾರಿಯಿಂದ ಏನಾದರೂ ಕಾಯಕ ಮಾಡಬೇಕು. ಇಲ್ಲವಾದಲ್ಲಿ ದಾರಿದ್ರ್ಯ ಮೈಗೂಡಿ ಮನುಷ್ಯ ಎಲ್ಲವನ್ನು ಕಳೆದುಕೊಂಡು ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದು ತಟ್ಟೆ ಬಾರಿಸುತ್ತ ಭಿಕ್ಷೆ ಬೇಡುತ್ತಾ ತಿರುಗಬೇಕಾಗುತ್ತದೆ,’ ಎಂದು.
ಭಿಕ್ಷಾಪಾತ್ರೆ ಹಿಡಿಯುವುದು ಅಥವಾ ಭಿಕ್ಷೆ ಬೇಡುವುದು ಎಂದರೆ, ಅದು ಒಬ್ಬ ಮನುಷ್ಯನ ದಾರಿದ್ರದ, ಅಧ:ಪತನದ, ಅಧೋಗತಿಯ, ಅವನತಿಯ ಸೂಚನೆ. ಮುಂದಾಲೋಚನೆ ಇಲ್ಲದೆ ಬದುಕಿದ್ದುದರ ಸ್ಪಷ್ಟ ನಿದರ್ಶನ. ಅವರ ಪ್ರಸ್ತಾಪ ಇಲ್ಲಿ ಮಾಡುವುದರಿಂದ, ಅದು ವೈಯಕ್ತಿಕವಾಗಿ ಯಾರಿಗೂ ಮಾಡುವ ಅವಮಾನವಲ್ಲ. ಅದರಿಂದ ಕಲಿಯುವುದು ಸಾಕಷ್ಟಿದೆ. ತಿದ್ದುಕೊಳ್ಳುವುದು ಇನ್ನೂ ಬಹಳಷ್ಟಿದೆ.
ವಿಶೇಷವೆಂದರೆ, ಸಾಕಷ್ಟು ಜನ ಬಿಕ್ಷುಕರು ತಮ್ಮ ಅಶಕ್ತತೆ, ಬುದ್ಧಿಮಾಂದ್ಯತೆ, ಅನಕ್ಷರತೆ, ಅಂಗವಿಕಲತೆಯನ್ನೇ ಬಂಡವಾಳವಾಗಿಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಹಾಗೂ, ಇನ್ನಿತರ ಜನ ಬಿಕ್ಷುಕರು ಅಶಕ್ತರಲ್ಲ, ಬುದ್ಧಿಮಾಂದ್ಯರಲ್ಲ, ಅನಕ್ಷರಸ್ಥರಲ್ಲ, ಅಂಗವಿಕಲರಲ್ಲ, ಅಪ್ರಬುದ್ಧರಲ್ಲ. ಆದರೂ,
ದಾರಿದ್ರ್ಯ ಮೈಗೂಡಿ ಎಲ್ಲವನ್ನು ಕಳೆದುಕೊಂಡು ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದು ತಟ್ಟೆ ಬಾರಿಸುತ್ತ ಭಿಕ್ಷೆ ಬೇಡುತ್ತಾ ತಿರುಗಾಡುತ್ತಿರುತ್ತಾರೆ.
http://sanket-yenagi-india.blogspot.com/2020/06/blog-post_17.html